ಮುಗಿಲ ಮಾರಿಗೆ ರಾಗರತಿಯಾ

ರಚನೆ – ದ ರಾ ಬೇಂದ್ರೆ
ಗಾಯನ: ಸಂಗೀತ ಕಟ್ಟಿ
Video: https://www.youtube.com/watch?v=WkvaZyLqlLY


ಮುಗಿಲ ಮಾರಿಗೆ ರಾಗರತಿಯಾ (2)

ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಮುಗಿಲ ಮಾರಿಗೆ ರಾಗರತಿಯಾ
ನಂಜ ಏರಿತ್ತ, ಆಗ ಸಂಜೆ ಆಗಿತ್ತ ಆಗ ಸಂಜೆ ಆಗಿತ್ತ

ನೆಲದ ಅಂಚಿಗೆ ಮಂಜಿನ ಮುಸುಕೂ ಹ್ಯಾಂಗೋ ಬಿದ್ದಿತ್ತಾ,
ಗಾಳಿಗೆ ಮೇಲಕ್ಕೆದ್ದಿತ್ತ ಗಾಳಿಗೆ ಮೇಲಕ್ಕೆದ್ದಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವು ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವು ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ

ಇರುಳ ಹರಳಿನ ಅರಳ ಮಲ್ಲಿಗೆ ಜಾವಿಗೆ ಹಾಂಗಿತ್ತ, ಸೂಸ್ಯಾವ ಚಿಕ್ಕೆ ಹತ್ತಿತ್ತ
ಬೊಗಸೆಗಣ್ಣಿನ ಬಯಕೆ ಹೆಣ್ಣು ನೀರಿಗೆ ಹೋಗಿತ್ತ..ತಿರುಗಿ ಮನೆಗೆ ಸಾಗಿತ್ತ

ಬೊಗಸೆಗಣ್ಣಿನ ಬಯಕೆ ಹೆಣ್ಣು ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ
ಕಾಮಿ ಬೆಚ್ಚಿಹಾಂಗ ಭಾವಿಹಾದಿ ಕಾಲಾಗ ಸುಳಿದಿತ್ತ ಎರಗಿ ಹಿಂದಕ್ಕುಳಿದಿತ್ತ.
ಮಳ್ಳ ಗಾಳಿ ಸುಳಿದಳ್ಳ ಕೈಲೆ ಸೆರಗನು ಹಿಡಿದಿತ್ತ ಮತ್ತ ಮತ್ತ ಬೆರಗಿಲೆ ಬಿಡತಿತ್ತ
ಮಳ್ಳ ಗಾಳಿ ಸುಳಿದಳ್ಳ ಕೈಲೆ ಸೆರಗನು ಹಿಡಿದಿತ್ತ
ಮತ್ತ ಮತ್ತ ಬೆರಗಿಲೆ ಬಿಡತಿತ್ತ
ಒಂದು ಮನದ ಗಿಳಿ ಹಿಂದ ನೆಳ್ಳಿಗೆ ಬನ್ನಿಲೆ ಬರಲಿತ್ತ
ತನ್ನಾ ಮೈಮನ ಮರೆತಿತ್ತ

Leave a comment