ಬ್ಯಾಚುಲರ್ ಲೈಫ್!

ಸತತವಾಗಿ ಆರು ವರ್ಷಗಳಿಂದ ತಿಂಗಳಿಗೊಮ್ಮೆ ಒಗಿತಿದ್ದೆ ಬಟ್ಟೆ,
ಹಾಗಂತ ನಾನು ಪ್ರೊಫೆಷನಲ್ ಅಗಸ ಅಲ್ರಿ, ಬ್ಯಾಚುಲರ್ ಅಷ್ಟೆ!

ಆ ಕಷ್ಟದಿಂದ ಪಾರಾಗೋಕೆ ಅಂತ ತಂದೆ washing machine ಇವತ್ತಷ್ಟೇ,
ಕೇಳ್ರಪ್ಪೋ, ಇದು ಕವನ ಅಂತೂ ಅಲ್ಲ ಬ್ಯಾಚುಲರ್ ಹುಡುಗರ ಕಷ್ಟ ಹೇಳೋ ನಾಲ್ಕು ಸಾಲು ಅಷ್ಟೇ! 😉

ಪ್ರೊಕ್ರಾಸ್ಟಿನೇಶನ್!

Quote

“ನಾಳೆ ಎಂದವನ ಮನೆ ಹಾಳು!” ಎಂದು ತಿಳಿದಿದ್ದು ಮೊನ್ನೆ,
ಏನು ಮಾಡುವ ಬಗ್ಗೆ ಯೋಚಿಸಿದ್ದು ನೆನ್ನೆ.
ಯೋಚನೆಯ ದಣಿವಿಂದ ಹೊಳೆದ idea’ಗಳು – ಸೊನ್ನೆ
ಮುಂದೂಡುವ ಚಟ, ಇದರ ಇಂಗ್ಲೀಷು ಪದ – ಪ್ರೊಕ್ರಾಸ್ಟಿನೇಶನ್ನೇ?

— ಚೆಕ್ ಮಾಡಿ, ನಾಳೆ ಹೇಳ್ತೀನಿ!  😉

ಓ ಗೆಳತಿ!…

ಓ ಗೆಳತಿ… ನಿನ್ನ ನೋಡ್ತಾ
ಗೀಚಿದ ಪ್ರತಿ ಸಾಲು ಕವನವಾಯ್ತು,
ಆಡಿದ ಪ್ರತಿ ಮಾತೂ ಹಾಡಾಯ್ತು,
ಸುಳಿದ ಜಾಗವೆಲ್ಲಾ ಸುಂದರವಾಯ್ತು,
ಬಿದ್ದಾಗ ಆದ ಗಾಯ ಮಾತ್ರ ವಾಸಿಯಾಗದೆ ಹೋಯ್ತು!

ಇದು ನಾನು ಬರೆದ ಕಿರು ಕವನವಾಗೋಯ್ತು  😉