Friendship Day!

ಹೋಗೋ ಗುಳ್ದು; ಯಾಕೋ loaper!; ಮುಚ್ಚಪ್ಪ ಸಾಕು;
ಸರಿ, ನಿಮ್ಮ ಹಸುನೆ ಮುಂದೆ;
ಇಲ್ಲ ಮಗ;  ಹೂ ಮಚ್ಚ;  ಹೌದು ಗುರುವೇ;
ಏನ್ರೀ ಹೇಗಿದ್ದೀರ?
– ಸಲಿಗೆ ಎಳ್ಳಷ್ಟಇರಲಿ, ಓರೋಷ್ಟು ಇರಲಿ .

ಚಡ್ಡಿ, ಚಿಕೆನ್,
ಕಾರು, ಬೀರು,
ಚಪ್ಪಲಿ,ಸಾಕ್ಸು,
ಪ್ಯಾಂಟು, ಶರ್ಟು

ಎಲ್ಲಾ ಶೇರ್ ಮಾಡ್ಲಿ,

ರೋಟಿ, ದಾಲ್,
ಆಂಧ್ರ ಪಪ್ಪು,
ಕಡಕ್, ಹಲಸಂದೆ,

ಏನೇ ತಿನ್ನಲಿ,

ಬೆಂಗಳೂರು, ಬಿಹಾರ್,
ಪಾವಗಡ, ಶಿಮೊಗ್ಗ,
ರತ್ನಗಿರಿ, ಕೆಂಗೇರಿ,
ರೈಚೂರ್, ಸಿರಾ, ಮುತ್ಕುರ್,
ಬೇವಿನಹಳ್ಳಿ, ಬೊಮ್ಮಸಂದ್ರ,
ನೀ ಎಲ್ಲಿನವರಾದ್ರೂ ಆಗ್ಲಿ,

ನನ್ನ ಗೋಳು ಕೇಳೋ,
ಮಾತು ಕೇಳೋ,
ಅಳಿಸೊ, ನಗಿಸೋ,
ತಿದ್ದೋ, ತಿದ್ದೋ ಅವಕಾಶ ಕೊಟ್ಟೋ,

“ಕುಯ್ದಿದ್ದು ಸಾಕು, ನಿಲ್ಸೋ!”

ಅನ್ನೋ, ಎಲ್ಲ ಗೆಳೆಯ, ಗೆಳತಿಯರಿಗೂ:

“ನೀವಿಲ್ಲದ ಜೀವನ ಚೂರು, ಬೋರು,
ಬೇಜಾರು.
ನಿಮಗಿದೊ ಒಂದು ಪುಟ್ಟ ನಮಸ್ಕಾರ!”

Happy first Sunday of August!

ಲೇಟ್ ಆಗಿದೆ.
Adjust ಮಾಡ್ಕೊಳಿ!

ಅವಳ ಮನ್ನಣೆ!

ಉರಿ ಬೇಸಿಗೆಯ ಸಂಜೆ. ಇಕ್ಕಟ್ಟಿನ ಬಸ್ ಸೀಟ್ ಮೇಲೆ ಕುಂತಿದ್ದೆ.
“ರೈ! ರೈ!” ಅಂದ, ಆ ಕಂಡಕ್ಟರ್.

ಮುಳುಗುತ್ತಿದ್ದ, ray-ban company ಬೇನಾಮಿ ಮಾಲೀಕ, ಸೂರ್ಯ,
ದಿನವಿಡೀ ಬೆಂದು, ಬೆವರಿ, dehyrate’ಆದ ಭೂಮಿ,
ಅದರ ಮೇಲೆ ನನ್ನ ಎಷ್ಟೋ ನಿರೀಕ್ಷೆಗಳನ್ನು ಒಯ್ಯುತಿದ್ದ ಆ ಬಸ್ಸು,
ಒಳಗೆ ಇಕ್ಕಟ್ಟಿನ ಸೀಟ್, ಮೇಲೆ ನಾನು.

ಆ ನಿಮಿಷಕ್ಕೆ ನನ್ನ ಆಲೋಚನೆ ಎಲ್ಲ ಉಳಿದ ಎಂಟು stop’ಗಳು,
ಮತ್ತು ಅಲ್ಲಿಂದ ನಾನು ನಡೆಯಬೇಕಿದ್ದ ಒಂದು ಮೈಲಿ ದೂರದ ಬಗ್ಗೆ ಆಗಿತ್ತು.

ನನ್ನ ನಿರೀಕ್ಷೆ ಏನಾಗಿತ್ತು ಗೊತ್ತೆ?

ಅಲ್ಲಿಯ ವರೆಗೂ ನನ್ನ ಜೊತೆ ಸಂಭಾಷಣೆಯಲ್ಲಿ ತೊಡಗಿದ್ದ ಆ ಹುಡುಗಿಯಬಗ್ಗೆ,
ಮತ್ತು ಹೇಗಾದರೂ ಅವಳ ಮನ್ನಣೆ ಪಡೆಯುವ ಪ್ರಯತ್ನ ಮಾಡಲೇಬೇಕೆಂದು!

ಪ್ರಮಾಣ ಮಾಡಿ ಹೇಳುತಿದ್ದೀನಿ. ಅವಳು ದೇವತೆ!
ಸರಸ್ವತಿಯಷ್ಟು ಜಾಣೆ, ಪಾರ್ವತಿಯಷ್ಟು ಕರುಣೆ,
ಲಕ್ಷ್ಮಿಯಷ್ಟು ಧಾರಾಳ,
ಅವಳ ಚಂದವ ಹೋಲುವ ದೇವತೆಯೂ ಇಲ್ಲವೇನೋ
ಅನ್ನೋಷ್ಟು ವಿರಳ!

ಏಕೋ ಏನೋ ಉಳಿದ ಪ್ರಯಾಣ ಇನ್ನಷ್ಟು ಮಂದಗತಿಯಿಂದ ಸಾಗಲು ಆರಂಭಿಸಿತು.
ಉಳಿದ stop’ಗಳನ್ನು ಎಣಿಸುತಿದ್ದ ನನ್ನ stop ಕೊನೆಗೂ ಬಂತು.

ನನ್ನ ನಿರೀಕ್ಷೆ ಈಡೇರೋ ಸಮಯ ಅದು.

ಕಷ್ಟ ಪಟ್ಟು ಸುಮಾರು ಮೂರು ನಾಲ್ಕನೇ ಭಾಗದ ಪ್ರಯಾಣದುದ್ದಕ್ಕೂ
ನಿಯಿಂತ್ರಿಸಿದ “ಸುಸ್ಸು” ಗೆ ಹೋಗೋ ಸಮಯ ಅದು!
ಸಾಮಾಜಿಕ ಪ್ರಜ್ಞೆ ಇಲ್ಲದಂತೆ ಗಿಡದ ಪೊದೆಯಲ್ಲಿ “ಸುಸ್ಸು” ಮಾಡಲೇ ಬೇಕಾಯಿತು.

“ರೈ! ರೈ!” ಅಂದ, ಆ ಕಂಡಕ್ಟರ್ ಇನ್ನೊಮ್ಮೆ.

ಅವಳ ಮನ್ನಣೆ ಸಿಕ್ಕಿತೋ ಏನೋ ತಿಳಿಯೆ.
ಸ್ವಲ್ಪ ಯಾಮಾರಿದ್ರೆ ಜೀವನದುದ್ದಕ್ಕೂ ಕಳ್ಕೊಳೋಷ್ಟು ಮರ್ಯಾದೆ,
ಒಂದು ನಿಮಿಷದಲ್ಲಿ ಕಳ್ಕೋತಿದ್ದೆ.

ದೇವರೇ, Toilet ಇರೋ ಬಸ್’ಗಳನ್ನು ರಿಯಾಯಿತಿ ಬೆಲೆಯಲ್ಲಿ ಮಾರು ತಂದೆ!

 

ಬಂದ್!

ಬಂದ್’ಎಂದು ಬರಲಿಲ್ಲ ಬಸ್ಸೊಂದೂ ಅಂದು.
ಕೊನೆಗಲ್ಲಿ ಬಂದಿದ್ದು ಎತ್ತಿನಗಾಡಿ ಒಂದೇ ಒಂದು..
ಬಂದ್’ಆದ ಕಾರಣ ತಿಳಿಯಿತೆನಗೆ ಇಂದು..
ಬಿಳಿಗೋಡೆ  ಬೇಕೆಂದು, ಭವಗಂತನ ಗುಡಿ ಬೇಕೆಂದು ಜನ ಬಡಿದಾಡಿದರಿಂದ ” ಎಂದು..
ನಾಕೆಳುವ ಪ್ರಶ್ನೆ ಒಂದೇ ಒಂದು: “ಬಾಳುವ ನಾಲ್ಕು ದಿನ ಬಡಿದಾಟವಿದೇಕೆಂದು?”

ಬದುಕು ಹಿತವಲ್ಲವೆ ನಾವು ಬಂಧುಗಳಾಗಿದ್ದರೆ ಎಂದೆಂದೂ.

ಐದು ವರ್ಷದ ಕಾರ್ಮಿಕ!

ನಾನೊಬ್ಬ ಕಾರ್ಮಿಕ, ದಿನಗೂಲಿಯ ಕಾರ್ಮಿಕ. ಆ ದಿನದ ದಣಿವು, ಹಸಿವು, ನಿದ್ರೆ ತರುವ ಹುಮ್ಮಸ್ಸಿನ ಕಾರ್ಮಿಕ .
ನಾನೊಬ್ಬ ಕಾರ್ಮಿಕ, ಹೊಲ ಉಳುವ ರೈತ. ಹದದ ಮಳೆ, ಬಿಸಿಲು, ಗಾಳಿ ನನ್ನ ಪಾಲಿನ ವರ. ನಾ ಭೂತಾಯಿಯ ಪ್ರೀತಿಯ ಕಾರ್ಮಿಕ.
ನಾನೊಬ್ಬ ಕಾರ್ಮಿಕ, ನಾನೊಬ್ಬ ಚಾಲಕ. ಚಲಿಸುವ ವಾಹನದಿಂದ ನನ್ನ ತುತ್ತಿನ ಉಗಮ, ಸ್ಥಗಿತ ಸಂಚಾರವ ಮೆಟ್ಟಿ ನಿಲ್ಲುವ ಕಾರ್ಮಿಕ.
ನಾನೊಬ್ಬ ಕಾರ್ಮಿಕ, ದುಡಿಮೆಯೇ ದೇವರೆಂದು ನಂಬಿದ, ಜೀವನ ಸುಧಾರಿಸುವ ಕಸುಬುಗುಳ ನಂಬಿರುವ, ತೆರಿಗೆ ಕಟ್ಟುವ ಕಾರ್ಮಿಕ.

 

ನಾನೊಬ್ಬ ಕಾರ್ಮಿಕ, ನಾನೊಬ್ಬ ರಾಜಕಾರಣಿ. ದೇಶದ ಪ್ರಗತಿಗಾಗಿ ದುಡಿವೆನೆಂದು ಪಣತೊಟ್ಟ ಕಾರ್ಮಿಕ.
ಕಾರ್ಮಿಕನ ಕಷ್ಟ ತನಗೆ ಬರದಿರಲೆಂದು, ಕಷ್ಟ ಪಟ್ಟು ಲಂಚ ದುಡಿವ ಕಾರ್ಮಿಕ.
ನೀತಿ ರಾಜಕಾರಣಿಗಳ ತುಳಿದುಹಾಕುವ ಕಾರ್ಮಿಕ.
ಆಷಾಢಭೂತಿ ಕಾರ್ಮಿಕ.

 

ನಂಬಿ. ನಾನು ನಿಮ್ಮ ಐದು ವರ್ಷದ ಕಾರ್ಮಿಕ!

ದೇವತೆಯೋ, ಮಾಯೆಯೊ!

ಆಕಸ್ಮಿಕವಾಗಿ ಕಂಡ ನಿನ್ನ ಕುಡಿನೋಟ,
ಕಂಡು ಕಾಣದಂತೆ ನಕ್ಕ ನಿನ್ನ ನಗು,

ಚಂದ್ರನ ಅಚ್ಚೆನಿಸುವ ನಿನ್ನ ಮುಖ,
ಹಿಂತಿರುಗಿ ನೋಡದೆ ಹೋದ ನೀನು,

ಕಂಡಿದ್ದು ಕನಸಲ್ಲೊ, ಇಲ್ಲ ನನಸಲ್ಲೋ!
?
ನೀನು ನನ್ನ ಪಾಲಿನ ದೇವತೆಯೋ, ಇಲ್ಲ ಮಾಯೆಯೊ!?