ಆಟ ಮುಗಿದಿಲ್ಲ, ನೀನಿನ್ನು ಸೋತಿಲ್ಲ!

ಹಸಿವಿರಲಿ, ಬಿಸಿಲಿರಲಿ, ಕರಗದ ಕಗ್ಗತ್ತಲಿರಲಿ,
ದೂರುವವರೇ ಗೆಲ್ಲಲಿ, ಹೂಡುವ ಪ್ರತಿ ಯತ್ನ ವಿಫಲವಾಗಲಿ,
ಗೆಲುವು ಮರೀಚಿಕೆಯಂತೆ ಕಾಡಲಿ, ಕಷ್ಟಗಳು ಕರೆಯದೆಯೇ ಬರಲಿ;

ನಿನ್ನ ನಡತೆ ಕೆಡದಿರಲಿ, ಮನಸು ಧೃತಿಕೆಡದಿರಲಿ,
ಮುಖದ ಮೇಲೆ ನಗು ಬಾಡದಿರಲಿ; ಒಳ್ಳೆಯದೇ ನೀ ಸದಾ ಬಯಸಲಿ;
ಆಟ ಮುಗಿದಿಲ್ಲ, ನೀನಿನ್ನು ಸೋತಿಲ್ಲವೆಂಬ ನಂಬಿಕೆ ಇರಲಿ!

Advertisements